ಕೊರೊನಾ ವಿರುದ್ಧ ಈಟಿವಿ ಭಾರತ ಕಳಕಳಿ...ಗಾಯಕ ವಿಜಯ್ಪ್ರಕಾಶ್ ಕಂಠಸಿರಿಯಲ್ಲಿ ಜಾಗೃತಿ ಗೀತೆ - ಕರ್ನಾಟಕ ಪೊಲೀಸ್
ಇಡೀ ಮನುಕುಲವೇ ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದೆ. ಹೆಮ್ಮಾರಿಯನ್ನು ಹೊಡೆದೋಡಿಸಲು ದೇಶಕ್ಕೆ ದೇಶವೇ ಟೊಂಕ ಕಟ್ಟಿದೆ. ಭಾರತ ಕೈಗೊಂಡ ಕ್ರಮಗಳು, ಉಪಾಯಗಳಿಗೆ ವಿಶ್ವ ನಾಯಕರು ತಲೆದೂಗಿದ್ದಾರೆ. ಜಾತಿ, ಮತ, ಪಕ್ಷಭೇದವಿಲ್ಲದೆ ಎಲ್ಲರೂ ವೈರಸ್ ವಿರುದ್ಧ ಸಮರ ಸಾರಿದ್ದಾರೆ. ಈಟಿವಿ ಭಾರತ ಸಹ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದೆ. ಗೀತೆಯ ಮೂಲಕ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನ ಮಾಡುತ್ತಿದೆ. ಸಾಹಿತಿ ನಾಗಾರ್ಜುನ್ ಶರ್ಮಾ ಅರ್ಥಗರ್ಭಿತವಾಗಿ ರಚಿಸಿರುವ ಗೀತೆಯನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮನಮುಟ್ಟುವಂತೆ ಹಾಡಿದ್ದಾರೆ. ಈಟಿವಿ ನೆಟ್ವರ್ಕ್ ಮತ್ತು ಈಟಿವಿ ಭಾರತ ಪ್ರಸ್ತುತಪಡಿಸಿದ ಜಾಗೃತಿ ಗೀತೆ ಇಲ್ಲಿದೆ.
Last Updated : Apr 3, 2020, 9:17 PM IST