ಗರ್ಭಿಣಿ ಬದುಕಿಸಲು ರೈಲ್ವೆ ಸ್ಟೇಷನ್ ಪ್ಲಾಟ್ಫಾರ್ಮ್ಗೆ ರಿಕ್ಷಾ ತೆಗೆದುಕೊಂಡ ಬಂದ ಡ್ರೈವರ್! - ಗರ್ಭಿಣಿ ಮಹಿಳೆ
ಮುಂಬೈ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನ ಆಸ್ಪತ್ರೆಗೆ ದಾಖಲು ಮಾಡಲು ರೈಲ್ವೆ ಸ್ಟೇಷನ್ ಪ್ಲಾಟ್ಫಾರ್ಮ್ನೊಳಗೆ ಡ್ರೈವರ್ ಒಬ್ಬ ಆಟೋ ತೆಗೆದುಕೊಂಡು ಬಂದಿರುವ ಘಟನೆ ಮುಂಬೈನ ವಿರಾರ್ ರೈಲ್ವೆ ಸ್ಟೇಷನ್ನಲ್ಲಿ ನಡೆದಿದೆ. ಡ್ರೈವರ್ ಮಾಡಿರುವುದು ಅಪರಾಧ ಎಂದು ಗೊತ್ತಾಗುತ್ತಿದ್ದಂತೆ ಆತನನ್ನು ರೈಲ್ವೆ ಸ್ಟೇಷನ್ ಪೊಲೀಸರು ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಿದ್ದರು. ಆತನಿಗೆ ಕೋರ್ಟ್ ಕಿವಿಮಾತು ಹೇಳಿ ಬಿಟ್ಟಿದೆ. ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್,ಆಟೋ ರಿಕ್ಷಾ ಡ್ರೈವರ್ ಮಾಡಿರುವ ಕೆಲಸ ನಿಜಕ್ಕೂ ಶ್ಲಾಘನೀಯ. ಆದರೆ ಪ್ಲಾಟ್ಫಾರ್ಮ್ವೊಳಗೆ ಆಟೋ ತೆಗೆದುಕೊಂಡು ಬಂದು ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಆತನನ್ನು ಬಂಧನ ಮಾಡಿ, ರಿಲೀಸ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.