ಕರ್ನಾಟಕ

karnataka

ETV Bharat / videos

ಬೈಕ್​ ಓವರ್​ ಟೇಕ್​ ಮಾಡಿದ್ದಕ್ಕೆ ಬಿತ್ತು ಆಟೋ ಡ್ರೈವರ್​ ಹೆಣ! ವಿಡಿಯೋ... - ಕೊಯಂಬತ್ತೂರು ಸುದ್ದಿ

By

Published : Sep 29, 2019, 8:05 PM IST

ಕೇವಲ ಓವರ್​ ಟೇಕ್​ ವಿಷಯಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. ಓವರ್​ ಟೇಕ್​ ವಿಷಯದಲ್ಲಿ ಆಟೋ ಡ್ರೈವರ್​ ಮತ್ತು ಬೈಕ್​ ಸವಾರರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಯುವರಿಬ್ಬರು ನಡು ರಸ್ತೆಯಲ್ಲಿ ‘ನಮ್ಮ ಬೈಕೇ ಓವರ್​ ಟೇಕ್​ ಮಾಡ್ತೀಯಾ’ ಅಂತಾ ಆಟೋ ಡ್ರೈವರ್​ ಅರುಣ್​ ಪ್ರಸಾದ್​ ಎಂಬಾತನನ್ನು ಮನಬಂದಂತೆ ಕಬ್ಬಿಣದ ರಾಡ್​ನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಆಟೋ ಡ್ರೈವರ್​ಗೆ ಕಬ್ಬಿಣದ ರಾಡ್​ನಿಂದ ಚುಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ABOUT THE AUTHOR

...view details