ಜನನಿಬಿಡ ಸ್ಥಳದಲ್ಲೇ ಮಹಿಳೆಯನ್ನು ಅಪಹರಿಸಲು ಯತ್ನ: ವಿಡಿಯೋ ನೋಡಿ - Rajastan crime
ರಾಜಸ್ಥಾನ: ಕಾರಿನಲ್ಲಿ ಬಂದ ದುಷ್ಕರ್ಮಿಗಳು ಜನನಿಬಿಡ ಪ್ರದೇಶದಲ್ಲಿ ವಿವಾಹಿತ ಮಹಿಳೆಯನ್ನು ಅಪಹರಿಸಲು ಯತ್ನಿಸಿರುವ ಘಟನೆ ಧೋಲ್ಪುರ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯನ್ನು ಹೊತ್ತೊಯ್ಯುತ್ತಿದ್ದಂತೆಯೇ ಸುತ್ತಮುತ್ತಲಿದ್ದ ಜನರು ಆಕೆಯ ಸಹಾಯಕ್ಕೆ ಆರೋಪಿಗಳ ಹಿಂದೆಯೇ ಓಡಿದ್ದು, ಮಹಿಳೆ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡಿದ್ದಾರೆ. ಜಗಳ ಆಗಿ ಪತಿಯಿಂದ ಕೆಲ ವರ್ಷಗಳಿಂದ ದೂರವಿದ್ದು, ಗಂಡನ ಸಂಬಂಧಿಕರೇ ನನ್ನನ್ನು ಅಪಹರಿಸಲು ಯತ್ನಿಸಿರುವುದಾಗಿ ಮಹಿಳೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.