ರಾತ್ರಿ ಕರ್ಫ್ಯೂ ಉಲ್ಲಂಘಿಸಿದವರ ತಪಾಸಣೆ ವೇಳೆ ದೆಹಲಿ ಎಸ್‌ಡಿಎಂ ಮೇಲೆ ದಾಳಿ! - ದೆಹಲಿ ಎಸ್‌ಡಿಎಂ ಮೇಲೆ ತಂಡದಿಂದ ದಾಳಿ
ನವದೆಹಲಿ: ಪೂರ್ವ ದೆಹಲಿಯ ಗಾಂಧಿ ನಗರದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮೇಲೆ ನಿನ್ನೆ ರಾತ್ರಿ ಸ್ಥಳೀಯ ಯುವಕರು ಕಲ್ಲು ಮತ್ತು ಗಾಜಿನ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ. ರಾತ್ರಿ ಕರ್ಫ್ಯೂ ಮತ್ತು ಕೊರೊನಾ ಪ್ರೋಟೋಕಾಲ್ಗಳನ್ನು ಅನುಸರಿಸಲು ಎಸ್‌ಡಿಎಂ ಮತ್ತು ಅವರ ತಂಡವು ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸಾರ್ವಜನಿಕವಾಗಿ ಮಾಸ್ಕ್ ಧರಿಸದ ಕಾರಣ ಯುವಕರಿಗೆ 2,000 ರೂ. ದಂಡ ವಿಧಿಸಲಾಗಿತ್ತು. ತಪಾಸಣೆಗಾಗಿ ನಿಲ್ಲಿಸಿದ ಕಾರಣ ಯುವಕರು ಅಧಿಕಾರಿಗಳೊಂದಿಗೆ ಜಗಳವಾಡಿದ್ದಾರೆ. ಯಾರೂ ತೀವ್ರವಾಗಿ ಗಾಯಗೊಂಡಿಲ್ಲ. ಆದರೆ ಮಹಿಳೆಯೊಬ್ಬರ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಪಾಸಣೆ ತಂಡದ ಉಸ್ತುವಾರಿ ರಾಜೇಶ್ ಮಿತ್ತಲ್ ಮಾತನಾಡಿ, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.