ಕೈ ನಾಯಕನ ಕಾರ್ಯವೈಖರಿ ನೆನೆದು ಭಾವುಕರಾದ ಮೋದಿ: 'ಗುಲಾಮ್ಗೆ ಸಲಾಂ' ಎಂದ ಅಠಾವಳೆ - ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಕಣ್ಣೀರು
ನವದೆಹಲಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ ಅವರ ಅವಧಿ ಮುಕ್ತಾಯವಾಗಲಿದೆ. ಗುಲಾಂ ನಬಿ ಅವರ ಕಾರ್ಯವೈಖರಿ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಕಣ್ಣೀರಿನ ವಿದಾಯ ಹೇಳಿದರು. ಗುಲಾಂ ನಬಿ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಮತ್ತು ಆರ್‌ಪಿಐ ನಾಯಕ ರಾಮದಾಸ್ ಅಠಾವಳೆ, ನೀವು ಸದನಕ್ಕೆ ಮರಳಬೇಕು. ಕಾಂಗ್ರೆಸ್ ನಿಮ್ಮನ್ನು ಮರಳಿ ತರದಿದ್ದರೆ, ನಾವು ಆ ಕೆಲಸ ಮಾಡಲು ಸಿದ್ಧರಿದ್ದೇವೆ. ಈ ಸದನಕ್ಕೆ ನೀವು ಬೇಕು. ಗುಲಾಮ್ಗೆ ಸಲಾಂ ಎಂದು ಹೇಳಿದ್ದಾರೆ.