ಅಸ್ಸೋಂನಲ್ಲಿ ನಿಲ್ಲದ ಬ್ರಹ್ಮಪುತ್ರೆಯ ಅಬ್ಬರ: ಪ್ರವಾಹಕ್ಕೆ 129 ಬಲಿ - ಪ್ರವಾಹಕ್ಕೆ 129 ಬಲಿ
ಗುವಾಹಟಿ: ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿ ನಿಧಾನವಾಗಿ ತಹಬದಿಗೆ ಬರುತ್ತಿದೆ. ಆದರೂ ಪ್ರವಾಹದ ಅಬ್ಬರಕ್ಕೆ ಮತ್ತಿಬ್ಬರು ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 129ಕ್ಕೆ ಏರಿಕೆ ಆಗಿದೆ. ರಾಜ್ಯದ 22 ಜಿಲ್ಲೆಗಳಲ್ಲಿ 22.34 ಲಕ್ಷ ಜನರು ತೊಂದರೆಗೊಳಗಾಗಿದ್ದಾರೆ. ನಿಧಾನವಾಗಿ ಪ್ರವಾಹಪೀಡಿತರ ಸಂಖ್ಯೆಯಲ್ಲೂ ಇಳಿಕೆ ಕಂಡು ಬರುತ್ತಿದೆ. ಆದರೂ ಇನ್ನೂ ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಸಂಕಷ್ಟದಲ್ಲಿರುವ ಜನರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.