ಕರ್ನಾಟಕ

karnataka

ETV Bharat / videos

ಅಸ್ಸೋಂನಲ್ಲಿ ಬ್ರಹ್ಮಪುತ್ರನ ರೋಷಾವೇಷ : 110 ಜನರು ಬಲಿ - 991 ಹಳ್ಳಿಗಳು ಮುಳುಗಡೆ

By

Published : Aug 4, 2020, 8:19 AM IST

Updated : Aug 4, 2020, 8:46 AM IST

ಗುವಾಹಟಿ: ಅಸ್ಸೋಂನಲ್ಲಿ ಬ್ರಹ್ಮಪುತ್ರ ನದಿಯ ಪ್ರವಾಹ ಇನ್ನೂ ನಿಂತಿಲ್ಲ. ಇನ್ನೂ 19 ಜಿಲ್ಲೆಗಳು ಪ್ರವಾಹದಿಂದ ಸಂಕಷ್ಟದಲ್ಲೇ ಇವೆ. 991 ಹಳ್ಳಿಗಳು ಮುಳುಗಡೆ ಆಗಿವೆ. ಪ್ರವಾಹಕ್ಕೆ ಇದುವರೆಗೂ 110 ಜನ ಪ್ರಾಣ ಕಳೆದುಕೊಂಡಿದ್ದಾರೆ. ಭೂ ಕುಸಿತದಿಂದ ಸುಮಾರು 26 ಮಂದಿ ಅಸುನೀಗಿದ್ದಾರೆ. ಇನ್ನೂ 7,89,032 ಜನರು ಪ್ರವಾಹದಿಂದ ಬಳಲುತ್ತಿದ್ದಾರೆ. ಬ್ರಹ್ಮಪುತ್ರ ಮತ್ತು ಅದರ ಉಪ ನದಿಗಳು ವಿವಿಧ ಜಿಲ್ಲೆಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೊರೊನಾ ಕಷ್ಟದ ನಡುವೆ ಇಲ್ಲಿನ ಜನರನ್ನ ಪ್ರವಾಹ ಮತ್ತಷ್ಟು ಗಂಡಾಂತರಕ್ಕೆ ದೂಡಿದೆ.
Last Updated : Aug 4, 2020, 8:46 AM IST

ABOUT THE AUTHOR

...view details