ಅಸ್ಸೋಂನಲ್ಲಿ ನಿಲ್ಲದ ಪ್ರವಾಹ : 1771 ಗ್ರಾಮಗಳು ಜಲಾವೃತ - 1771 ಗ್ರಾಮಗಳು ಜಲಾವೃತ
ಗುವಾಹಟಿ: ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ರಾಜ್ಯದ 33 ಜಿಲ್ಲೆಗಳಲ್ಲಿ ಪ್ರಸ್ತುತ 21 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. 60 ಕಂದಾಯ ವಲಯದ ಸುಮಾರು 1771 ಗ್ರಾಮಗಳು ಜಲಾವೃತವಾಗಿವೆ. ರಾಜ್ಯದಲ್ಲಿ ಒಟ್ಟಾರೆ ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾಳಾಗಿದೆ. ಪ್ರವಾಹ ಸ್ವಲ್ಪ ಮಟ್ಟಿಗೆ ತಗ್ಗಿದ್ದರೂ ಇನ್ನೂ 19,81,801 ಜನರು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 135ಕ್ಕಿಂತಲೂ ಹೆಚ್ಚಾಗಿದೆ.