ಇಂಡೋ-ಚೀನಾ ಸಂಘರ್ಷ ಉಭಯ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆ: ಅಶೋಕ್ ಕೆ ಕಾಂತಾ - ಇಂಡಿಯಾ ಚೀನಾ ವಾರ್ ಅಪ್‌ಡೇಟ್
ಭಾರತ ಮತ್ತು ಚೀನಾ ಗಡಿ ವಿವಾದವನ್ನು ಬಗೆಹರಿಸದಿದ್ದರೆ ಭವಿಷ್ಯದಲ್ಲೂ ಭಯಾನಕ ಘರ್ಷಣೆಗಳು ಮುಂದುವರಿಯಲಿವೆ ಎಂದು ಬೀಜಿಂಗ್‌ನ ಭಾರತದ ಮಾಜಿ ರಾಯಭಾರಿ ಅಶೋಕ್ ಕೆ ಕಾಂತಾ ಅವರು ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ನಡೆಸಿದ ವಿಶೇಷ ಸಂದರ್ಶನದಲ್ಲಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಎಲ್ಲಾ ವಾಸ್ತವ ಸಂಗತಿಗಳ ಬಗ್ಗೆ ತಿಳಿದುಕೊಳ್ಳದೆ ನೇರವಾಗಿ ಮಾತುಕತೆ ನಡೆಸುವ ಸಮಯ ಇದಲ್ಲವೆಂದು ಕಾಂತಾ ಹೇಳಿದ್ದಾರೆ.