ಅತ್ಯಾಚಾರಿಗಳಿಗೆ ಗಲ್ಲು... ಸಹೋದರಿ ಹಾಗೂ ವಕೀಲೆಯನ್ನ ತಬ್ಬಿಕೊಂಡು ಸಂಭ್ರಮಿಸಿದ ನಿರ್ಭಯಾ ತಾಯಿ - ಅತ್ಯಾಚಾರಿಗಳಿಗೆ ಗಲ್ಲು
ನವದೆಹಲಿ: ನಿರ್ಭಯಾ ಅತ್ಯಾಚಾರಿಗಳನ್ನ ಗಲ್ಲಿಗೇರಿಸುತ್ತಿದ್ದಂತೆ ನಿರ್ಭಯಾ ತಾಯಿ ಆಶಾದೇವಿ ತನ್ನ ಸಹೋದರಿ ಸುನಿತಾ ದೇವಿ ಹಾಗೂ ವಕೀಲೆ ಸೀಮಾ ಕುಶ್ವಾ ಅವರನ್ನ ಅಪ್ಪಿಕೊಂಡು ಸಂಭ್ರಮಿಸಿದ್ದಾರೆ. ಬರೋಬ್ಬರಿ 7 ವರ್ಷದ ಹೋರಾಟದ ಬಳಿಕ ನಿರ್ಭಯಾ ತಾಯಿಗೆ ಗೆಲುವು ಸಿಕ್ಕಿದ್ದು, ನಮ್ಮ ಮಗಳು ನಿರ್ಭಯಾ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದಿರುವ ಅವರು, ನ್ಯಾಯ ಸಿಗುವುದು ವಿಳಂಬವಾದರೂ, ಸತ್ಯಕ್ಕೆ ಸಿಕ್ಕಿರುವ ಗೆಲುವು ಇದಾಗಿದೆ. ತಾಯಿ ಧರ್ಮ ಪೂರ್ಣಗೊಳಿಸಿರುವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.