ನದಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ದಂಪತಿ ರಕ್ಷಣೆ ಮಾಡಿದ ಪೊಲೀಸರು... ವಿಡಿಯೋ - ಭಾರೀ ಮಳೆ
ಅರುಣಾಚಲಪ್ರದೇಶ: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗ್ತಿದ್ದು, ಕೆಲವೊಂದು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ ಅನೇಕರು ಸಾವನ್ನಪ್ಪಿದ್ದಾರೆ. ಇದರ ಮಧ್ಯೆ ಪ್ರವಾಹದಿಂದಾಗಿ ಪಾಸಿಘಾಟ್ನ ಸಿಬೊ ಕೊರೊಂಗ್ ನದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ದಂಪತಿ ರಕ್ಷಣೆ ಮಾಡುವಲ್ಲಿ ಪೊಲೀಸರು ಮತ್ತು ಪೂರ್ವ ಸಿಯಾಂಗ್ ಜಿಲ್ಲಾ ವಿಪತ್ತು ನಿರ್ವಹಣಾ ಸಂಸ್ಥೆ ಯಶಸ್ವಿಯಾಗಿದೆ.