ಸಂಪೂರ್ಣ ತಿಳಿದುಕೊಳ್ಳದೇ ರೈತ ಚಳವಳಿ ಬಗ್ಗೆ ಕಲಾವಿದರು ಮಾತನಾಡಬಾರದು : ನಟ ಗೋವಿಂದ - ನಟ ಗೋವಿಂದ
ಕಾನ್ಪುರ: ದೆಹಲಿಯೂ ಸೇರಿದಂತೆ ದೇಶದ ಬಹುತೇಕ ಕಡೆಗೆ ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಹೋರಾಟದ ಬಗ್ಗೆ ಬಿಟೌನ್ ನಟ ಗೋವಿಂದ್ ಪ್ರತಿಕ್ರಿಯಿಸಿದ್ದಾರೆ. ರೈತರು ನಡೆಸ್ತಿರುವ ಹೋರಾಟದ ವಿಷಯ ತುಂಬಾ ಸೂಕ್ಷ್ಮವಾಗಿದೆ. ಅದನ್ನು ಅರ್ಥಮಾಡಿಕೊಳ್ಳುವವರು ಕಷ್ಟಪಡುತ್ತಿದ್ದಾರೆ, ಇದು ಎರಡೂ ಕಡೆಗಳಲ್ಲಿ ಒಂದು ವಿಷಯವಾಗಿದೆ, ಒಂದು ಕಡೆ ದೇಶದ ಪರಿಸ್ಥಿತಿಯ ಬಗ್ಗೆ ಯೋಚಿಸಬೇಕು, ಇನ್ನೊಂದು ಬದಿಯಲ್ಲಿ ಅದು ಅಡಚಣೆಯ ವಿಷಯವಾಗಿದೆ. ಅದರ ಬಗ್ಗೆ ಸಂಪೂರ್ಣ ಗೊತ್ತಿರದೇ ಕಲಾವಿದ ಅದನ್ನು ಚರ್ಚಿಸಬಾರದು ಎಂದಿದ್ದಾರೆ.