ಹಿಮದಲ್ಲಿ ಹೂತುಹೋಗಿದ್ದ ನಾಗರಿಕರನ್ನು ರಕ್ಷಿಸಿದ ಯೋಧರು! ವಿಡಿಯೋ - Indian army news
ಶ್ರೀನಗರ: ಹಿಮದಲ್ಲಿ ಸಿಕ್ಕಿಹಾಕಿಕೊಂಡಿದ್ದ ನಾಗರಿಕರನ್ನು ಭಾರತೀಯ ಸೇನೆಯ ಯೋಧರು ರಕ್ಷಿಸಿದ್ದಾರೆ. ಕಾಶ್ಮೀರದ ಲಚ್ಚಿಪುರದಲ್ಲಿ ಜನವರಿ 14ರಂದು ತಾರಿಕ್ ಇಕ್ಬಾಲ್ ಮತ್ತು ಜಹೂರ್ ಅಹ್ಮದ್ ಖಾನ್ ಎಂಬ ಇಬ್ಬರು ನಾಗರಿಕರು ಹಿಮದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಅವರನ್ನು ರಕ್ಷಿಸಿದ ಯೋಧರು, ಬಳಿಕ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಿ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ. ಈ ವಿಡಿಯೋವನ್ನು ಭಾರತೀಯ ಸೇನೆ ಶೇರ್ ಮಾಡಿಕೊಂಡಿದೆ.