ಕೊರೊನಾ ವದಂತಿಗಳಿಗೆ ಕಿವಿ ಕೊಡಬೇಡಿ, ಹ್ಯಾಂಡ್ ಶೇಕ್ ಬಿಟ್ಟು ನಮಸ್ತೇ ಹೇಳಿ ಎಂದ ಮೋದಿ - ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಮಹಾಮಾರಿ ಕೊರೊನಾ ವೈರಸ್ನಿಂದ ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳು ಬೆಚ್ಚಿಬಿದ್ದಿವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕಿವಿಮಾತು ಹೇಳಿದ್ದಾರೆ. ಕೊರೊನಾ ವದಂತಿ, ಊಹಾಪೋಹಗಳಿಗೆ ಕಿವಿಗೊಡಬೇಡಿ. ಯಾರಾದ್ರೂ ಸಿಕ್ಕಾಗ ಕೈ ಕುಲುಕುವುದನ್ನು (ಹ್ಯಾಂಡ್ ಶೇಕ್) ಬಿಟ್ಟು ಕೈ ಜೋಡಿಸಿ ನಮಸ್ತೇ ಹೇಳಿ ಎಂದಿದ್ದಾರೆ.