ಚಲಿಸುತ್ತಿದ್ದ ಟ್ಯಾಂಕರ್ಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ! - ಚಲಿಸುತ್ತಿದ್ದ ಟ್ಯಾಂಕರ್ಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ
ಆಂಧ್ರಪ್ರದೇಶ: ಚಲಿಸುತ್ತಿದ್ದ ಟ್ಯಾಂಕರ್ನ ಹಿಂದಿನ ಟೈರ್‌ಗೆ ತಲೆಕೊಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರದ ತಿರುಮಲ ಶ್ರೀವಾರಿ ದೇವಸ್ಥಾನದ ಬಳಿ ಇಂದು ಬೆಳಗ್ಗೆ ನಡೆದಿದೆ. ಹಾಲಿನ ಟ್ಯಾಂಕರ್ ಮುಂದೆ ವ್ಯಕ್ತಿ ಹಾರಿದ್ದಾರೆ ಎಂದು ವರದಿಯಾಗಿದ್ದು, ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ. ಇನ್ನು ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.