ಏಯ್, ಕೋಣ ಬೆಳದಂಗೆ ಬೆಳೆದಿದ್ದೀಯಾ ಅನ್ಬೇಡಿ..! ವರ್ಷಕ್ಕೆ ಈ ಸುಲ್ತಾನ್ನ ಸಂಪಾದನೆ 90 ಲಕ್ಷ - This is a huge demand for sperm
ಹರಿಯಾಣ: ಏನೂ ಕೆಲಸ ಮಾಡದೆ ಕೋಣ ಬೆಳದಂಗೆ ಬೆಳೆದಿದ್ದೀಯಲ್ಲೋ ಎಂಬ ಬೈಗುಳವನ್ನು ಈ ಕೋಣ ಏನಾದ್ರೂ ಕೇಳಿಸಿಕೊಂಡ್ರೆ ಮುಗಿದೇ ಹೋಯ್ತು. ಯಾಕೆ ಗೊತ್ತೇ? ಈ ಕೋಣನ ವಾರ್ಷಿಕ ಸಂಪಾದನೆಯ ಕಥೆ ಕೇಳಿದ್ರೆ ನೀವು ಮೂಗಿನ ಮೇಲೆ ಬೆರಳಿಡೋದು ಪಕ್ಕಾ. ಇದು ಅಂತಿಂಥ ಕೋಣವಲ್ಲ. ಇನ್ನೊಂದು 10 ಲಕ್ಷ ಸೇರಿಸಿದ್ರೆ ಈ ಕೋಣಪ್ಪ ವರ್ಷಕ್ಕೆ 1 ಕೋಟಿ ರೂಪಾಯಿ ಸಂಪಾದನೆ ಮಾಡ್ತಾನೆ.