ಕೋವಿಡ್ ಮಾರ್ಗಸೂಚಿಗೆ ಬ್ರೇಕ್: ಅದ್ಧೂರಿಯಾಗಿ ಬರ್ತಡೇ ಆಚರಿಸಿಕೊಂಡ ವೈಎಸ್ಆರ್ಸಿಪಿ ಮುಖಂಡ! - ಅದ್ಧೂರಿಯಾಗಿ ಬರ್ತಡೇ ಆಚರಿಸಿಕೊಂಡ ವೈಎಸ್ಆರ್ಸಿಪಿ ಮುಖಂಡ
ಕೃಷ್ಣ(ಆಂಧ್ರಪ್ರದೇಶ): ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಸಭೆ - ಸಮಾರಂಭ ನಡೆಸಲು ನಿರ್ಬಂಧ ಹೇರಲಾಗಿದೆ. ಆದರೆ, ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ನುನಾ ಗ್ರಾಮದಲ್ಲಿ ವೈಎಸ್ಆರ್ಸಿಪಿ ಮುಖಂಡ ವೆಂಕಟರಾವ್ ಅಪಾರ ಜನರ ಮಧ್ಯೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಸಾವಿರಾರು ಜನರು ಕೋವಿಡ್ ಮಾರ್ಗಸೂಚಿ ಗಾಳಿಗೆ ತೂರಿ ಇದರಲ್ಲಿ ಭಾಗಿಯಾಗಿದ್ದಾರೆ.