ರೋಲರ್ ಹಾಯಿಸಿ 72 ಲಕ್ಷ ರೂ. ಮೌಲ್ಯದ ಮದ್ಯ ನಾಶಪಡಿಸಿದ ಪೊಲೀಸರು: ವಿಡಿಯೋ - 72 ಲಕ್ಷ ರೂ. ಮೌಲ್ಯದ ಮದ್ಯ ನಾಶ
ಕೃಷ್ಣ(ಆಂಧ್ರಪ್ರದೇಶ): ಕೃಷ್ಣ ಜಿಲ್ಲೆಯ ಮಚಿಲಿಪಟ್ಟಣಂ ಪೊಲೀಸರು ಅಂದಾಜು 72 ಲಕ್ಷ ರೂ. ಮೌಲ್ಯದ ಮದ್ಯದ ಬಾಟಲಿಗಳನ್ನು ನಾಶಪಡಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಶೇಖರಿಸಿಡಲಾಗಿದ್ದ ವಿವಿಧ ಬ್ರ್ಯಾಂಡ್ನ ಮದ್ಯದ ಬಾಟಲಿ ವಶಪಡಿಸಿಕೊಳ್ಳಲಾಗಿತ್ತು. ಪೊಲೀಸ್ ಪರೇಡ್ ಮೈದಾನದಲ್ಲಿ ಇವುಗಳನ್ನು ರೋಲರ್ ಹಾಯಿಸಿ ನಾಶಪಡಿಸಲಾಗಿದೆ.