ಆಂಧ್ರ ಹುಡುಗ, ಅಫ್ಘಾನ್ ಹುಡುಗಿಗೂ ಲವ್: ಹಿಂದೂ ಸಂಪ್ರದಾಯದಂತೆ ಮ್ಯಾರೇಜ್!
ವಿಜಯವಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶ ಹುಡುಗನಿಗೂ, ಆಫ್ಘಾನಿಸ್ತಾನದ ಹುಡುಗಿಗೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಕಾರ್ಯಕ್ರಮ ನಡೆದಿದೆ. ವಿವೇಕಾನಂದ ರಾಮನ್ ಸದ್ಯ ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾರೆ. ಆಫ್ಘಾನ್ ಹುಡುಗಿ ಫ್ರಾಗ್ ಶಿರಿನಾ ಹಾಗೂ ವಿವೇಕಾನಂದ್ ಇವರಿಬ್ಬರು ದೆಹಲಿಯಲ್ಲಿ ವ್ಯಾಸಂಗ ಮಾಡ್ತಿದ್ದ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದೀಗ ಇಬ್ಬರ ಮನೆಯಲ್ಲಿ ಒಪ್ಪಿಕೊಂಡಿದ್ದರಿಂದ ಈ ಮದುವೆ ಅದ್ಧೂರಿಯಾಗಿ ನಡೆದಿದೆ.
Last Updated : Jan 8, 2021, 3:25 PM IST