ಜೋಡೆತ್ತು, ಇಂಧನ ರಹಿತ ಕಾರಿಗೆ ರೈತನೇ ಸಾರಥಿ : ಮಹೀಂದ್ರಾ ಗಮನ ಸೆಳೆದ ವಿಡಿಯೋ - Anand mahindra latest tweets
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಉದ್ಯಮಿ ಆನಂದ್ ಮಹೀಂದ್ರಾ ಅವರ ಟ್ವೀಟ್ವೊಂದು ಇದೀಗ ಭಾರಿ ವೈರಲ್ ಆಗಿದೆ. ಎತ್ತಿನ ಬಂಡಿಯ ವಿಡಿಯೋ ಅನ್ನು ಪೋಸ್ಟ್ ಮಾಡಿರುವ ಅವರು, ನವೀಕರಿಸಬಹುದಾದ ಇಂಧನ ಕಾರನ್ನು ಕಡಿಮೆ ವೆಚ್ಚದಲ್ಲಿ ಹೀಗೂ ತಯಾರಿಸಬಹುದು ಎಂದು ಹೇಳುವ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಎತ್ತುಗಳೆರಡು ಕಾರಿನ ಕ್ಯಾಬಿನ್ ಹೊಂದಿರುವ ಗಾಡಿಯನ್ನು ಧರ್ಮಸ್ಥಳದ ರಸ್ತೆಯಲ್ಲಿ ಎಳೆದೊಯ್ಯುತ್ತಿರುವುದನ್ನು ಟ್ವೀಟ್ ಮಾಡಿದ್ದಾರೆ. ಅವರ ಈ ಗಂಭೀರತೆ ಹಾಗೂ ಹಾಸ್ಯಭರಿಸದ ಟ್ವೀಟ್ ಈಗ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.