ಹಥ್ರಾಸ್ ಸಂತ್ರಸ್ತೆ ಕುಟುಂಬ ಭೇಟಿಗೆ ತೆರಳಿದ್ದ ಆಪ್ ಶಾಸಕನ ಮೇಲೆ ಇಂಕ್ ದಾಳಿ! - ಹಥ್ರಾಸ್ಗೆ ಎಎಪಿ ಶಾಸಕ ಭೇಟಿ
ಹಥ್ರಾಸ್: ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿರುವ ಹಥ್ರಾಸ್ ಸಂತ್ರಸ್ತೆ ಕುಟುಂಬದ ಭೇಟಿಗೆ ತೆರಳಿದ್ದ ಎಎಪಿ ಶಾಸಕನ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಇಂಕ್ ದಾಳಿ ನಡೆಸಿದ್ದಾನೆ. ಸಂತ್ರಸ್ತೆ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ಶಾಸಕರ ಮೇಲೆ ಇಂಕ್ ದಾಳಿ ನಡೆಸಿದ್ದಾನೆ. ಈ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.