ಅಚ್ಚರಿ! ತನ್ನ ಸುತ್ತ ಸುತ್ತಿದ ಕರಿ ನೆರಳು ನೋಡುತ್ತಲೇ ಪ್ರಾಣಬಿಟ್ಟ ವೃದ್ಧ: ವಿಡಿಯೋ ವೈರಲ್ - ಕರಿ ನೆರಳು ನೋಡುತ್ತಲೇ ಪ್ರಾಣಬಿಟ್ಟ ವೃದ್ಧ
ಮೀರತ್: ಉತ್ತರ ಪ್ರದೇಶದ ಮೀರತ್ ಗಾಗೋಲ್ ಗ್ರಾಮದಲ್ಲಿ ವಿಚಿತ್ರ ರೀತಿಯ ಘಟನೆ ನಡೆದಿದೆ. 'ಕಪ್ಪು ನೆರಳು' ಇರ್ಷಾದ್ ಎಂಬ ವೃದ್ಧನ ಸುತ್ತ ಸುತ್ತುತ್ತಿದ್ದು, ಇದನ್ನು ನೋಡುತ್ತಲೇ ಕೆಲವೇ ಸೆಕೆಂಡುಗಳಲ್ಲಿ ಆತ ಹೃದಯಾಘಾತವಾಗಿ ಕುಸಿದುಬಿದ್ದು ಮೃತಪಟ್ಟಿದ್ದಾನೆ. ಜನವರಿ 19 ರಂದು ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೃದ್ಧನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.