ಮಿಡಿದ ಹೃದಯ: ಹೆಂಡತಿ ಒಡವೆ ಮಾರಿ ಆಟೋವನ್ನೇ ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿದ ವ್ಯಕ್ತಿ - auto ambulance
ಭೋಪಾಲ್ (ಮಧ್ಯಪ್ರದೇಶ): ಕೋವಿಡ್ ತಂದಿಟ್ಟ ಪರಿಸ್ಥಿತಿಯಿಂದಾಗಿ ಜನರು ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್ ಸಿಗದೇ ಪರದಾಡುತ್ತಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ಕಂಡಿರುವ ಮಧ್ಯಪ್ರದೇಶದ ಭೋಪಾಲ್ನ ಜಾವೇದ್ ಖಾನ್ ಎಂಬ ಆಟೋ ಚಾಲಕ, ತನ್ನ ಆಟೋವನ್ನೇ ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿದ್ದಾನೆ. ಇದಕ್ಕಾಗಿ ತನ್ನ ಪತ್ನಿಯ ಆಭರಣಗಳನ್ನು ಮಾರಿದ್ದು, ಉಚಿತವಾಗಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾನೆ.