ಜ.22ರಿಂದ ಮೂರು ದಿನಗಳ ಕಾಲ ಅಸ್ಸಾಂಗೆ ಭೇಟಿ ನೀಡಲಿರುವ ಅಮಿತ್ ಶಾ - ಕೇಂದ್ರ ಗೃಹ ಸಚಿವ ಅಮಿತ್ ಶಾ
ಅಸ್ಸಾಂ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನವರಿ 22ರಿಂದ ಮೂರು ದಿನಗಳ ಕಾಲ ಅಸ್ಸಾಂಗೆ ಭೇಟಿ ನೀಡಲಿದ್ದಾರೆಂದು ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, ಅಮಿತ್ ಶಾ ಜನವರಿ 22ರ ಸಂಜೆ ಗುವಾಹಟಿಗೆ ಆಗಮಿಸಲಿದ್ದಾರೆ. 23ರಂದು ನಾರ್ತ್ ಈಸ್ಟರ್ನ್ ಕೌನ್ಸಿಲ್ (ಎನ್‌ಇಸಿ) ಸಭೆಯಲ್ಲಿ ಭಾಗವಹಿಸಲು ಶಿಲ್ಲಾಂಗ್‌ಗೆ ಹೋಗಿ, ಅದೇ ದಿನ ಗುವಾಹಟಿಗೆ ಮರಳಲಿದ್ದಾರೆ. ಜನವರಿ 24ರಂದು ಕೊಕ್ರಜಾರ್‌ನಲ್ಲಿ ಬಿಟಿಆರ್ ಒಪ್ಪಂದದ ಒಂದು ವರ್ಷದ ವಾರ್ಷಿಕೋತ್ಸವದ ನೆನಪಿಗಾಗಿ ಆಯೋಜಿಸಲಾಗಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬಳಿಕ ಕೊಕ್ರಜಾರ್‌ನಿಂದ ನಲ್ಬಾರಿಗೆ ಬಂದು ವಿಜಯ್ ಸಂಕಲ್ಪ ದಿವಸ್ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
TAGGED:
ಕೇಂದ್ರ ಗೃಹ ಸಚಿವ ಅಮಿತ್ ಶಾ