ಕೆವಾಡಿಯಾ ಜಂಗಲ್ನಲ್ಲಿ ಅಮಿತ್ ಶಾ ಸಫಾರಿ.. ಗಿಳಿಗೆ ಮೆಕ್ಕೆಜೋಳ ತಿನ್ನಿಸಿದ ಕೇಂದ್ರ ಗೃಹ ಸಚಿವ - ಕೆವಾಡಿಯಾ ಜಂಗಲ್
ಕೆವಾಡಿಯಾ(ಗುಜರಾತ್): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏಕತಾ ಪ್ರತಿಮೆಯಲ್ಲಿ ರಾಷ್ಟ್ರೀಯ ಏಕತಾ ದಿನದ ಕಾರ್ಯಕ್ರಮವನ್ನು ಮುಗಿಸಿದ ನಂತರ ವಿವಿಐಪಿ ಸರ್ಕ್ಯೂಟ್ ಹೌಸ್‌ಗೆ ತಲುಪಿ, ಅಲ್ಲಿಂದ ಅಮುಲ್‌ನ 75ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆನಂದ್‌ಗೆ ಹೋಗಬೇಕಿತ್ತು. ಆದರೆ, ಇದ್ದಕ್ಕಿದ್ದಂತೆ ಅಮಿತ್ ಶಾ ತಮ್ಮ ಪತ್ನಿಯೊಂದಿಗೆ ಕೆವಾಡಿಯಾ ಜಂಗಲ್ಗೆ ಆಗಮಿಸಿ ಸಫಾರಿ ಮಾಡಿದ್ದಾರೆ. ಈ ವೇಳೆ ಗಿಳಿಯೊಂದು ಶಾ ಅವರ ತೋಳಿನ ಮೇಲೆ ಬಂದು ಕುಳಿತಿತ್ತು. ಅದಕ್ಕೆ ಕೇಂದ್ರ ಗೃಹ ಸಚಿವರು ಗಿಳಿಗೆ ಮೆಕ್ಕೆಜೋಳ ತಿನ್ನಿಸಿ ಖುಷಿಪಟ್ಟರು.