ಎಎಂಯು ಕ್ಯಾಂಡಲ್ ಮಾರ್ಚ್ ಪ್ರಕರಣ... ವಿಡಿಯೋ ವೈರಲ್, 400 ಜನರ ಮೇಲೆ ದೂರು! - 400 booked for violating Section 144,
ಎಎಂಯುನಲ್ಲಿ ಕ್ಯಾಂಡಲ್ ಮಾರ್ಚ್ ಆಯೋಜಿಸುವ ಮೂಲಕ ಸೆಕ್ಷನ್ 144 ಉಲ್ಲಂಘಿಸಿದ್ದಕ್ಕಾಗಿ 400 ಅಪರಿಚಿತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಉತ್ತರಪ್ರದೇಶದ ಅಲೀಗಢ್ನಲ್ಲಿ ಡಿಸೆಂಬರ್ 15ರಂದು ಎನ್ಆರ್ಸಿ ಮತ್ತು ಸಿಎಎ ವಿರುದ್ಧ ಎಎಂಯು ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದರು. ಬಳಿಕ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು. ಘಟನೆ ಹತೋಟಿಗೆ ತರಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು. ಈ ವೇಳೆ ಅನೇಕರು ಪ್ರಾಣ ಕಳೆದುಕೊಂಡಿದ್ದರು. ಈಗ ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗ್ತಿದ್ದು, ಆತ್ಮರಕ್ಷಣೆ ಸಂಬಂಧ ಲಾಠಿಚಾರ್ಜ್ ಮಾಡಲಾಗಿದೆ ಅಂತಾ ಎಸ್ಎಸ್ಪಿ ಆಕಾಶ್ ಕುಲ್ಹಾರಿ ಹೇಳಿದ್ದಾರೆ.