ಕರ್ನಾಟಕ

karnataka

ETV Bharat / videos

ಇಎನ್​ಸಿ ಕಮಾಂಡ್​ ಆಗಿ ಅಜೇಂದ್ರ ಬಹದ್ದೂರ್ ಸಿಂಗ್ ನೇಮಕ - ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್

By

Published : Mar 1, 2021, 1:30 PM IST

ವಿಜಯವಾಡ( ಆಂಧ್ರಪ್ರದೇಶ): ವೈಸ್ ಅಡ್ಮಿರಲ್ ಅಜೇಂದ್ರ ಬಹದ್ದೂರ್ ಸಿಂಗ್ ಅವರು ವಿಶಾಖಪಟ್ಟಣಂನ ಈಸ್ಟರ್ನ್ ನೇವಲ್ ಕಮಾಂಡ್ ಹೆಡ್ ಕ್ವಾರ್ಟರ್ಸ್​ನಲ್ಲಿ ಇಂದು ನಡೆದ ಸಮಾರಂಭದ ಪೆರೇಡ್​ನಲ್ಲಿ ಈಸ್ಟರ್ನ್ ನೇವಲ್ ಕಮಾಂಡ್ (ಇಎನ್​ಸಿ) ಯ ಕಮಾಂಡ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಎಬಿ ಸಿಂಗ್​ ಅವರು ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಎಫ್ಒಸಿ-ಇನ್-ಸಿ) ಈಸ್ಟರ್ನ್ ನೇವಲ್ ಕಮಾಂಡ್ ಆಗಿ, ವೈಸ್ ಅಡ್ಮಿರಲ್ ಅತುಲ್ ಕುಮಾರ್ ಜೈನ್ ಅವರಿಂದ ನವದೆಹಲಿಗೆ ವರ್ಗಾಯಿಸಲ್ಪಟ್ಟರು. ಅವರನ್ನು ಸಮಗ್ರ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಇವರನ್ನು ಸೆರೆಮೋನಿಯಲ್ ಗಾರ್ಡ್ ಮತ್ತು ವಿವಿಧ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ನೌಕಾಪಡೆಯ ಸಿಬ್ಬಂದಿಗಳನ್ನೊಳಗೊಂಡ ಒಂದು ವಿಧ್ಯುಕ್ತ ಪೆರೇಡ್ ವಿಧ್ಯುಕ್ತ ಮೆರವಣಿಗೆಯೊಂದಿಗೆ ಗೌರವಿಸಿತು.

ABOUT THE AUTHOR

...view details