ಕರ್ನಾಟಕ

karnataka

ETV Bharat / videos

ಏರ್​ ಇಂಡಿಯಾ -2021: ಆಗಸದಲ್ಲಿ ಸ್ವದೇಶಿ ನಿರ್ಮಿತ ಯುದ್ಧವಿಮಾನಗಳ ತಾಕತ್ತು ಅನಾವರಣ - ಬೆಂಗಳೂರು ಏರ್​ ಇಂಡಿಯಾ ಶೋ

By

Published : Feb 3, 2021, 1:23 PM IST

Updated : Feb 3, 2021, 1:44 PM IST

ಬೆಂಗಳೂರು: ಏರ್​ ಇಂಡಿಯಾ- 2021ನ 13ನೇ ಆವೃತ್ತಿ ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿದ್ದು, ಲೋಹದ ಹಕ್ಕಿಗಳು ಆಕಾಶವನ್ನ ಆಕರ್ಷವಾಗಿಸಿವೆ. ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್​ ಸೂರ್ಯ ಕಿರಣ್, ಯುದ್ಧ ವಿಮಾನ ಸಾರಂಗ್​​ ಜಂಟಿ ಪ್ರದರ್ಶನ ನಡೆಯುತ್ತಿದ್ದು, ಸಾರಂಗ್​​ನಿಂದ ಡಾಗ್ ಫೈಟ್ ಪ್ರದರ್ಶನ ನಡೆಯುತ್ತಿದೆ. ಸೂರ್ಯ ಕಿರಣ್ ಹೆಲಿಕಾಪ್ಟರ್​​ಗಳು ಯುದ್ಧದ ಸಂದರ್ಭದಲ್ಲಿ ನಡೆಯುವ ಕಸರತ್ತನ್ನು ಪ್ರಸ್ತುತಪಡಿಸಿವೆ. ತೇಜಸ್ ಮುಂದಾಳತ್ವದಲ್ಲಿ 5 ಸಮರ ವಿಮಾನಗಳ ಹಾರಾಟ ನಡೆಯುತ್ತಿದೆ. ಎಲ್ಲವೂ ದೇಸೀ ನಿರ್ಮಿತ ಯುದ್ಧ ವಿಮಾನಗಳಾಗಿದ್ದು, ಆಗಸವನ್ನೇ ಆವರಿಸಿ ಭಾರತದ ಯುದ್ಧ ವಿಮಾನಗಳ ತಾಕತ್ತನ್ನು ಪ್ರದರ್ಶಿಸುತ್ತಾ ನೋಡುಗರನ್ನು ರೋಮಾಂಚನಗೊಳಿಸುತ್ತಿವೆ.
Last Updated : Feb 3, 2021, 1:44 PM IST

ABOUT THE AUTHOR

...view details