ಕೊರೊನಾ ಸಂಕಷ್ಟ: ಮಗನಿಗೆ ಚಿಕಿತ್ಸೆ ಕೊಡಿಸಲು 20 ಕಿ.ಮೀ ಹೊತ್ತುಕೊಂಡು ಬಂದ ದಂಪತಿ! - ಮಹಾಮಾರಿ ಕೊರೊನಾ ವೈರಸ್
ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧ ಇಡೀ ದೇಶವೇ ಹೋರಾಟ ನಡೆಸಿದೆ. ಇದರ ಬೆನ್ನಲ್ಲೇ ಜನಸಾಮಾನ್ಯರು ಅನೇಕ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಇಂತಹ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮಗುವಿಗೆ ಚಿಕಿತ್ಸೆ ಕೊಡಿಸಲು ದಂಪತಿ ಬರೋಬ್ಬರಿ 20 ಕಿ.ಮೀ ನಡೆದು ಬಂದು ಆಸ್ಪತ್ರೆ ಸೇರಿಸಿದ್ದಾರೆ. ದೆಹಲಿಯ ಏಮ್ಸ್ನಲ್ಲಿ ಮಗುವಿಗೆ ದಾಖಲು ಮಾಡಿದ್ದು, ಚಿಕಿತ್ಸೆ ಕೊಡಿಸುತ್ತಿದ್ದಾರೆ.