ಮಹಿಳೆಯರ ಬಟ್ಟೆ ಒಗೆದು ಮತಯಾಚಿಸಿದ ಎಐಎಡಿಎಂಕೆ ಅಭ್ಯರ್ಥಿ - ವಿಡಿಯೋ - ಮಹಿಳೆಯರ ಬಟ್ಟೆ ಒಗೆದು ಮತಯಾಚಿಸಿದ ಎಐಎಡಿಎಂಕೆ ಅಭ್ಯರ್ಥಿ ತಂಗಕತಿರಾವನ್
ತಮಿಳುನಾಡು: ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗುತ್ತಿದೆ. ಚುನಾವಣೆಗೆ ಕೇವಲ ಎರಡು ವಾರಗಳು ಬಾಕಿ ಇರುವಾಗ, ಎಐಡಿಎಂಕೆ ಪಕ್ಷದ ಇಬ್ಬರು ಮುಖಂಡರು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಮತದಾರರನ್ನು ಸೆಳೆಯಲು ಪಕ್ಷದ ನಾಯಕರು ವಿಚಿತ್ರವಾದ ಮಾರ್ಗವನ್ನು ಕಂಡುಕೊಂಡಿದ್ದಾರೆ. ನಾಗಪಟ್ಟಣಂನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ ತಂಗಕತಿರಾವನ್ ನಾಗೂರಿನಲ್ಲಿ ಮಹಿಳೆಯರ ಬಟ್ಟೆ ಒಗೆದು ಮತಯಾಚನೆ ಮಾಡಿದ್ದಾರೆ. ಈ ವಿಡಿಯೋವನ್ನು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ, ವಾಷಿಂಗ್ ಮಷಿನ್ನನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.