ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ... ಭಾರತೀಯ ಪೌರತ್ವ ಪಡೆದುಕೊಳ್ಳುವ ಖುಷಿಯಲ್ಲಿ ಪಾಕ್ ಮಹಿಳೆ! - ಪಾಕಿಸ್ತಾನದ ಮಹಿಳೆ ಶಾರದಾ ಸಿದ್ಧವಾನಿ
ಬೋಲಂಗೀರ್: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳ್ಳಲು ಕ್ಷಣಗಣನೆ ಆರಂಭಗೊಂಡಿದ್ದು, ಅದರ ವಿರುದ್ಧ ಅನೇಕ ರಾಜ್ಯಗಳಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಇದರ ಮಧ್ಯೆ ಪಾಕಿಸ್ತಾನದ ಮಹಿಳೆಯೋರ್ವಳು ಭಾರತೀಯ ಪೌರತ್ವ ಪಡೆದುಕೊಳ್ಳುವ ಸಂತಸದಲ್ಲಿದ್ದಾರೆ. ಕಳೆದ 30 ವರ್ಷಗಳಿಂದ ಭಾರತದಲ್ಲಿ ಜೀವನ ನಡೆಸುತ್ತಿರುವ ಶಾದರಾ ಸಿದ್ದವಾನಿ ಮೂಲತ ಪಾಕ್ನವಳಾಗಿದ್ದು, ಆಕೆಯ ಬಳಿ ಪಾಕಿಸ್ತಾನದ ಪಾಸ್ಪೋರ್ಟ್ ಸಹ ಇದೆ. ಭಾರತದ ಮಹೇಶ್ ಕುಮಾರ್ ಜತೆ ವಿವಾಹವಾಗಿರುವ ಈಕೆ, ಪಾಕಿಸ್ತಾನದವಳು ಎಂಬ ವಿಷಯ ಮದುವೆ ಆದಮೇಲೆ ಗೊತ್ತಾಗಿದ್ದರಿಂದ ಆಕೆಗೆ ಇಲ್ಲಿಯವರೆಗೆ ಭಾರತೀಯ ಪೌರತ್ವ ಸಿಕ್ಕಿಲ್ಲ. ಇದೀಗ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅನುಮೋದನೆಗೊಂಡಿರುವುದರಿಂದ ಈಕೆ ಸಂತೋಷಗೊಂಡಿದ್ದಾಳೆ.