ಕಾಲೇಜು ವಿದ್ಯಾರ್ಥಿನಿಯರ ಮೇಲೆ ಹರಿದ ಮಿನಿ ಬಸ್: ಸಿಸಿಟಿವಿ ವಿಡಿಯೋ ವೈರಲ್ - MInibus hits and 11 students injured news
ಕನ್ಯಾಕುಮಾರಿ: ಇಲ್ಲಿನ ದೇವಕುಮಾರಿ ಮಹಿಳಾ ಕಾಲೇಜು ರಸ್ತೆಯಲ್ಲಿ ನಡೆದ ಅಪಘಾತದ ದಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡಿಸೆಂಬರ್ 11ರಂದು ಈ ಅಪಘಾತ ನಡೆದಿದ್ದು, ಕಾಲೇಜು ಮುಗಿಸಿ ಮನೆ ಕಡೆ ಹೆಜ್ಜೆ ಹಾಕುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಮಿನಿ ಬಸ್ ಹರಿದಿದೆ. ಘಟನೆಯಿಂದ 11 ವಿದ್ಯಾರ್ಥಿನಿಯರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
TAGGED:
ಕನ್ಯಾಕುಮಾರಿ ಅಪಘಾತ ಸುದ್ದಿ