ಕರ್ನಾಟಕ

karnataka

ETV Bharat / videos

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: 2 ಶಾಸಕರಿಗೆ ನೋಟಿಸ್​​ ನೀಡಿದ ಎಸಿಬಿ

By

Published : Jul 25, 2020, 3:12 PM IST

ರಾಜಸ್ಥಾನ: ರಾಜಕೀಯ ಬಿಕ್ಕಟ್ಟು ಹಾಗೂ ಶಾಸಕರ ಕುದುರೆ ವ್ಯಾಪಾರದ ಕುರಿತು ತನಿಖೆ ನಡೆಸುತ್ತಿರುವ ರಾಜಸ್ಥಾನ ಎಸಿಬಿ, ಶಾಸಕರಾದ ಭನ್ವರ್​​​​ಲಾಲ್​ ಶರ್ಮಾ ಮತ್ತು ವಿಶ್ವವೇಂದ್ರ ಸಿಂಗ್ ಅವರಿಗೆ ಮತ್ತೊಮ್ಮೆ ನೋಟಿಸ್ ನೀಡಿದೆ. ಈ ಕುರಿತು ಎಸಿಬಿ ಎಫ್‌ಐಆರ್ ದಾಖಲಿಸುವ ಮೂಲಕ ತನಿಖೆ ಆರಂಭಿಸಿದೆ. ಈ ಪ್ರಕರಣದಲ್ಲಿ ಎಸಿಬಿ ಈ ಹಿಂದೆ ನೀಡಿರುವ ಯಾವುದೇ ನೋಟಿಸ್‌ಗೆ ಸ್ಪಂದಿಸದ ಕಾರಣ ಎಸಿಬಿ ಪ್ರಧಾನ ಕಚೇರಿಯು ಶಾಸಕರಾದ ಭನ್ವರ್ಲಾಲ್ ಶರ್ಮಾ ಮತ್ತು ವಿಶ್ವವೇಂದ್ರ ಸಿಂಗ್ ಅವರಿಗೆ ಮತ್ತೊಮ್ಮೆ ನೋಟಿಸ್ ನೀಡಿದೆ. ನೋಟಿಸ್ ಕಳುಹಿಸುವ ಮೂಲಕ ಇಬ್ಬರು ಶಾಸಕರು ಪ್ರಕರಣದ ವಿಚಾರಣೆ ಮತ್ತು ಹೇಳಿಕೆಯನ್ನು ದಾಖಲಿಸಲು ಸಂಶೋಧನಾ ಅಧಿಕಾರಿ ಮುಂದೆ ಹಾಜರಾಗುವಂತೆ ಕೋರಲಾಗಿದೆ. ಈ ಬಾರಿ ಇಬ್ಬರೂ ಶಾಸಕರು ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ, ಎಸಿಬಿ ಇಬ್ಬರು ಶಾಸಕರ ವಿರುದ್ಧ ವಾರಂಟ್ ಹೊರಡಿಸಬಹುದಾಗಿದೆ.

ABOUT THE AUTHOR

...view details