ಕೋವಿಡ್ನಿಂದ ಗುಣಮುಖ: ಪ್ಲಾಸ್ಮಾ ದಾನ ಮಾಡಿದ ಎಎಪಿ ಶಾಸಕಿ ಅತಿಶಿ - ನವದೆಹಲಿ
ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಕೊರೊನಾ ವೈರಸ್ ಸೋಂಕಿಗೊಳಗಾಗಿ ಸಂಪೂರ್ಣ ಗುಣಮುಖರಾಗಿರುವ ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಜನೋಪಯೋಗಿ ಕೆಲಸ ಮಾಡಿದ್ದಾರೆ. ವಸಂತ್ ಕುಂಜ್ನಲ್ಲಿರುವ ಇನ್ಸ್ಟ್ಯೂಟ್ ಆಫ್ ಲಿವರ್ ಆ್ಯಂಡ್ ಬಿಲಿಯರಿ ಸೈನ್ಸ್ ಆಸ್ಪತ್ರೆಯಲ್ಲಿ ಅವರು ಪ್ಲಾಸ್ಮಾ ದಾನ ಮಾಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪ್ಲಾಸ್ಮಾ ದಾನಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಕೆಲಸ ಮಾಡಿ ಮಾನವೀಯತೆ ತೋರುವಂತೆ ಅವರು ಮನವಿ ಮಾಡಿದರು.