ರಸ್ತೆ ಬಂದ್: ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸುವಾಗ ಮಹಿಳೆಯ ಸಾವು - ಬಾರಾಮುಲ್ಲಾ ಜಿಲ್ಲೆಯ ಚರಿಂಡ ಒರಿ
ಉತ್ತರ ಕಾಶ್ಮೀರ: ಬಾರಾಮುಲ್ಲಾ ಜಿಲ್ಲೆಯ ಚರಿಂಡ ಒರಿಯಲ್ಲಿ ರಸ್ತೆ ಮುಚ್ಚಿದ ಪರಿಣಾಮ ಸರಿಯಾದ ಸಮಯಕ್ಕೆ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದ ಕಾರಣ ಆಕೆ ಸಾವಿಗೀಡಾಗಿದ್ದಾಳೆ. ಒರಿಯ ಎಲ್‌ಒಸಿಯಲ್ಲಿ ಈ ಘಟನೆ ನಡೆದಿದೆ. ಈ ಮಹಿಳೆಯನ್ನು ಹಾಳಾದ ರಸ್ತೆ ಮುಖಾಂತರವೇ ಹೊತ್ತುಕೊಂಡು ಆಸ್ಪತ್ರೆಗೆ ಹೋಗಲಾಗುತ್ತಿತ್ತು. ಮೃತರನ್ನು ನಸೀರ್ ಅವರ ಪತ್ನಿ ಜರೀನಾ ಬೇಗಂ (25) ಎಂದು ಗುರುತಿಸಲಾಗಿದೆ.