ಹೊಟ್ಟೆಗೆ ಕೂಳಿಲ್ಲದೇ ಪರದಾಟ... ಗರ್ಭಿಣಿ ಪತ್ನಿಯನ್ನ 425 ಕಿ.ಮೀ ಬೈಸಿಕಲ್ನಲ್ಲೇ ಕರೆದೊಯ್ದ ವೀರ..!
ಕೊರೊನಾ ಇಡೀ ಜಗತ್ತನೇ ನಡುಗಿಸುತ್ತಿರುವಂತಹ ಒಂದು ಸೂಕ್ಷ್ಮ ವೈರಾಣು. ಅದರ ತಡೆಗಟ್ಟುವಿಕೆಗೆ ದೇಶಾದ್ಯಂತ ಲಾಕ್ಡೌನ್ ಹೇರಲಾಗಿದೆ. ಆದ್ರೆ ಇಲ್ಲಿ ವ್ಯಥೆ ಪಟ್ಟವರಲ್ಲಿ ವಲಸೆ ಕಾರ್ಮಿಕರ ಪಾಲು ದೊಡ್ಡದು. ಈ ವಿಡಿಯೋ ನೋಡಿ. ಮಧ್ಯಪ್ರದೇಶದ ಈತ ಜೈಪುರದಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದ. ಲಾಕ್ಡೌನ್ ಕಾರಣದಿಂದಾಗಿ ಊಟಕ್ಕೆ ಗತಿ ಇಲ್ಲದೇ ಪರದಾಡುವ ಸ್ಥಿತಿ ಎದುರಾಯಿತು. ಜೊತೆಗೆ ತನ್ನ ತುಂಬು ಗರ್ಭಿಣಿ ಹೆಂಡತಿ. ದಿಕ್ಕು ಕಾಣದ ಕುಟುಂಬ ಜೈಪುರ್ ಬಿಟ್ಟು ತನ್ನೂರು ಗುನಾಗೆ ಮರಳಿ ಬರುವ ಯೋಜನೆ ಹಾಕಿಕೊಂಡಿತು. ಗುನಾ ರಾಜಸ್ಥಾನದಿಂದ ಸುಮಾರು 425 ಕಿ.ಮೀ ದೂರ ಇದೆ. ಅಲ್ಲಿಂದ ಬರಲು ಯಾವುದೇ ವಾಹನ ಸೌಲಭ್ಯ ಇಲ್ಲದಾಯಿತು. ಪತ್ನಿ ತುಂಬು ಗರ್ಭಿಣಿಯಾಗಿದ್ದರಿಂದ ಆಕೆಗೆ ನಡೆಯುವುದೂ ಕಷ್ಟಕರವಾಗಿತ್ತು. ಆಗ ಹಳೇ ಸೈಕಲ್ಗೆ ಹೆಚ್ಚಿನ ಹಣ ತೆತ್ತು ತನ್ನ ಗರ್ಭಿಣಿ ಪತ್ನಿಯನ್ನು ಬೈಸಿಕಲ್ನಲ್ಲಿ ಕರೆದುಕೊಂಡು ಬರುತ್ತಿದ್ದಾನೆ. ಈತನಂತೆ ಇನ್ನೂ ಅನೇಕರು ಇಂತಹ ಸಂದಿಗ್ದ ಪರಿಸ್ಥಿತಿ ಎದುರಿಸುತ್ತಿದ್ದಾರೆ.