ಪ್ರೇಮ ವಿವಾಹದಲ್ಲಿ ಬಿರುಕು... ಕಟ್ಟಡದ ಮೇಲಿಂದ ಜಿಗಿಯಲೆತ್ನಿಸಿದ ಪತ್ನಿ! - ಕಟ್ಟಡದಿಂದ ಬಿಳಲೆತ್ನಿಸಿದ ಮಹಿಳೆ
ತೆಲಂಗಾಣದ ಸೂರ್ಯಪೇಟ ನಿವಾಸಿ ಅನಸೂಯಾ ಮತ್ತು ಆಂಧ್ರಪ್ರದೇಶದ ವಿಶಾಖ ಜಿಲ್ಲೆ ರಾವಿಕಮತಂ ಗ್ರಾಮದ ಶಿವ ಅವರದ್ದು ಲವ್ ಮ್ಯಾರೇಜ್. ಇಬ್ಬರ ಮಧ್ಯ ಇತ್ತೀಚೆಗೆ ಬಿರುಕು ಮೂಡಿದೆ. ಇದನ್ನು ಸರಿ ಪಡಿಸಿಕೊಳ್ಳದ ಅನಸೂಯ ತನ್ನ ಗಂಡ ಶಿವ ಕೆಲಸ ಮಾಡುತ್ತಿದ್ದ ಕಾಲೇಜ್ ಕಟ್ಟಡದ ಮೇಲಿಂದ ಜಿಗಿಯಲು ಯತ್ನಿಸಿದ್ದಾಳೆ. ಆದ್ರೆ ಕಾಲೇಜು ಸಿಬ್ಬಂದಿ ಆಕೆಯ ಪ್ರಾಣವನ್ನು ಕಾಪಾಡಿದ್ದಾರೆ. ಈ ಘಟನೆ ಪೂರ್ವ ಗೋದಾವರಿ ಜಿಲ್ಲೆ ಸೂರಂಪಾಲೆಂನಲ್ಲಿ ನಡೆದಿದೆ. ಇನ್ನು ಅನಸೂಯ ಆತ್ಮಹತ್ಯೆಗೆ ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.