Video-ವಿಶ್ರಾಂತಿಗೆ ಕುಳಿತ ವೇಳೆ ಮೈಮೇಲೆ ಎರಗಿದ ಚಿರತೆ - ಮಹಿಳೆಯ ಪ್ರತಿದಾಳಿಗೆ ಹೆದರಿ ಓಟ - ಮುಂಬೈನಲ್ಲಿ ಚಿರತೆ ದಾಳಿ
ಮುಂಬೈ: ಚಿರತೆ ದಾಳಿಯಿಂದ ಮಹಿಳೆಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ಮುಂಬೈನ ಗೋರೆಗಾಂವ್ನಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಗೋರೆಗಾಂವ್ ಪ್ರದೇಶದಲ್ಲಿ ಮಹಿಳೆಯೊಬ್ಬರು ಮನೆ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ವಿಶ್ರಾಂತಿಗಾಗಿ ಆಗ ತಾನೇ ಕುಳಿತುಕೊಂಡಿದ್ದರು. ಆಗ ಚಿರತೆ ದಾಳಿ ಮಾಡಿದೆ. ಆದ್ರೆ ಮಹಿಳೆ ಚಿರತೆಯನ್ನು ಹೊಡೆದು ಓಡಿಸಿದ್ದಾಳೆ.