ಗುಜರಿ ಗೋದಾಮಿಗೆ ತಗುಲಿದ ಬೆಂಕಿ... 40ಕ್ಕೂ ಹೆಚ್ಚು ಜನರನ್ನು ಕಾಪಾಡಿದ ದೇವತೆ! - woman 40 rescued from building where fire broke out,
ಪೂರ್ವ ದೆಹಲಿಯ ಕೃಷ್ಣ ನಗರದಲ್ಲಿರುವ ಗುಜರಿ ಗೋದಾಮುವೊಂದಕ್ಕೆ ಬೆಂಕಿ ತಗುಲಿದ್ದು, ಸುಮಾರು 40ಕ್ಕೂ ಹೆಚ್ಚು ಜನರನ್ನು ಮಹಿಳೆಯೊಬ್ಬಳು ಕಾಪಾಡಿದ್ದಾರೆ. ಇಂದು ಬೆಳಗ್ಗೆ 2:10 ಗಂಟೆಗೆ ನಾಲ್ಕು ಅಂತಸ್ತಿನ ಕಟ್ಟಡದ ಕೆಳಭಾಗದಲ್ಲಿ ಪ್ಲಾಸ್ಟಿಕ್ ಗುಜರಿ ಗೋದಾಮುವಿಗೆ ಬೆಂಕಿ ತಗುಲಿತ್ತು. ಈ ವೇಳೆ, ಕಟ್ಟಡದ ಪಕ್ಕದಲ್ಲಿ ವಾಸಿಸುತ್ತಿದ್ದ ಮಹಿಳೆಗೆ ಎಚ್ಚರವಾಗಿದ್ದು, ಹೊರ ಬಂದು ನೋಡಿದಾಗ ಬೆಂಕಿ ಹೊತ್ತಿ ಉರಿಯುತ್ತಿದ್ದನ್ನು ಕಂಡು ಕೂಡಲೇ ಕಟ್ಟಡದ ಮೇಲೇರಿ ಎಲ್ಲರನ್ನು ಎಚ್ಚರಿಸಿದ್ದಾರೆ. ಬಳಿಕ ಬಿಲ್ಡಿಂಗ್ನಲ್ಲಿ ವಾಸಿಸುತ್ತಿದ್ದ ನಿವಾಸಿಗಳು ಕೂಡಲೇ ಕೆಳಗಿಳಿದು ಸುರಕ್ಷಿತ ಸ್ಥಳಕ್ಕೆ ತೆರಳಿದರು. ಸುದ್ದಿ ತಿಳಿದ ಅಗ್ನಿಶಾಮಕ ದಳ ಐದು ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿತ್ತು. ಈ ಘಟನೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated : Dec 26, 2019, 10:48 PM IST