ಗೋಬರಿ ನದಿಯಲ್ಲಿ ಬಲೆಗೆ ಬಿದ್ದ ಅಪರೂಪದ ಮೀನು..! - Kendrapada district latest news
ಕೇಂದ್ರಪಾಡ: ಇಲ್ಲಿನ ಸದರ್ ಪೊಲೀಸ್ ವ್ಯಾಪ್ತಿಯಲ್ಲಿರುವ ಭೆಡಿಸಾಹಿ ಗ್ರಾಮದಲ್ಲಿ ನಿನ್ನೆ ರಾತ್ರಿ ಗೋಬರಿ ನದಿಯಲ್ಲಿ ಅಪರೂಪದ ಮೀನೊಂದು ಬಲೆಗೆ ಬಿದ್ದಿದೆ. ಗ್ರಾಮದ ಶರತ್ ಸೇಥಿಯ ಎಂಬ ವ್ಯಕ್ತಿ ಹಾಕಿದ ಬಲೆಗೆ ಈ ಮೀನು ಸಿಕ್ಕಿದೆ. 6 ಅಡಿ ಉದ್ದವಿರುವ ಈ ಮೀನು 50 ಕೆಜಿ ತೂಕ ಹೊಂದಿದೆ. ಬಲೆಗೆ ಬಿದ್ದಿರುವ ಅಪರೂಪದ ಮೀನನನ್ನು ನೋಡಲು ಜನ ಮುಗಿಬಿದ್ದಿದ್ದಾರೆ.