ಕರ್ನಾಟಕ

karnataka

ETV Bharat / videos

ವನ್ಯಜೀವಿ ಪ್ರಿಯನ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಅದ್ಭುತ ಚಿತ್ರಗಳಿವು! ನೀವೂ ಒಮ್ಮೆ ಕಣ್ತುಂಬಿಕೊಳ್ಳಿ - ಸೇಂಥಿಲ್​​ ಕುಮಾರನ್​

By

Published : Mar 3, 2020, 7:09 PM IST

ವೃತ್ತಿಯಲ್ಲಿ ಸಣ್ಣಮಟ್ಟದ ಕೈಗಾರಿಕೆ ನಡೆಸುತ್ತಿರುವ ಓರ್ವ ಉದ್ಯಮಿ ಇವರು. ಆದರೆ ಇವರಿಗೆ ಇರುವ ಪರಿಸರ ಪ್ರೇಮ ಅಪಾರವಾದದ್ದು. ಸೇಂಥಿಲ್​​ ಕುಮಾರನ್​ ಒಮ್ಮೆ ಕಬಿನಿ ಭಾಗದ ಅರಣ್ಯಕ್ಕೆ ತೆರಳಿದಾಗ ಕಾಡು ನಾಯಿಯೊಂದು ಬಲೆಗೆ ಸಿಕ್ಕಿ ಒದ್ದಾಡುತ್ತಿತ್ತಂತೆ. ಇದನ್ನು ಗಮನಿಸಿದ ಸೇಂಥಿಲ್​​ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಪ್ರಾಣಿಯನ್ನು ರಕ್ಷಿಸಿದ್ದರಂತೆ. ಸೇಂಥಿಲ್​​ಗೆ ಅಂದಿನಿಂದ ವನ್ಯಜೀವಿಗಳ ಮೇಲೆ ಉಂಟಾದ ಒಲವು ಇಂದಿಗೂ ಕಡಿಮೆಯಾಗಿಲ್ಲ. ಕಾಡು ಸುತ್ತುವುದು, ವನ್ಯಜೀವಿಗಳ ಫೋಟೋ ಸೆರೆ ಹಿಡಿಯುವುದು ಹಾಗೂ ಅವುಗಳ ಬಗ್ಗೆ ತಿಳಿದುಕೊಂಡು ಇತರರಿಗೂ ಪ್ರಾಣಿಗಳ ಬಗ್ಗೆ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ತಮಿಳುನಾಡಿನ ಸೇಂಥಿಲ್​ ಕುಮಾರನ್​ ಕರ್ನಾಟಕ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿನ ಅರಣ್ಯಗಳಿಗೆ ತೆರಳಿ ವನ್ಯಜೀವಿಗಳ ಛಾಯಾಗ್ರಹಣ ಮಾಡುವುದರೊಂದಿಗೆ ಸಂತಸ ಕಾಣುತ್ತಿದ್ದಾರೆ. ಸೇಂಥಿಲ್​ ಅವರ ಕ್ಯಾಮರಾ ಕಣ್ಣಿಗೆ ಸಿಕ್ಕ ಕೆಲವು ಫೋಟೋಗಳು ಇಲ್ಲಿವೆ ನೋಡಿ.

ABOUT THE AUTHOR

...view details