ಭಾಷಣದ ವೇಳೆ ಜನರ ಘೋಷಣೆ: ಹತ್ತಿರ ಹೋಗಿ ಸಮಸ್ಯೆ ಆಲಿಸಿದ ಪ್ರಿಯಾಂಕಾ ಗಾಂಧಿ - ಪ್ರಿಯಾಂಕಾ ಗಾಂಧಿ ವಾದ್ರಾ
ಮಥುರಾ(ಉತ್ತರ ಪ್ರದೇಶ): ಮಥುರಾದಲ್ಲಿ ನಡೆದ ರೈತರ ರ್‍ಯಾಲಿಯಲ್ಲಿ ಭಾಗಿಯಾಗಿ ಪ್ರಿಯಾಂಕಾ ಗಾಂಧಿ ಭಾಷಣ ಮಾಡುತ್ತಿದ್ದ ವೇಳೆ ಜನರು ಘೋಷಣೆ ಕೂಗಲು ಪ್ರಾರಂಭಿಸಿದ್ದಾರೆ. ಈ ವೇಳೆ ತಕ್ಷಣ ಭಾಷಣ ಅರ್ಧಕ್ಕೆ ಮೊಟಕುಗೊಳಿಸಿದ ಪ್ರಿಯಾಂಕಾ, ವೇದಿಕೆಯಿಂದ ಇಳಿದು ಪ್ರತಿಭಟನಾಕಾರರ ಬಳಿ ಹೋಗಿ ಅವರ ಕುಂದು - ಕೊರತೆ ಆಲಿಸಿದ್ದಾರೆ. ರಾಜಸ್ಥಾನದ ಭರತ್ಪುರ್ದಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿನ ಹಸ್ತಕ್ಷೇಪದ ಬಗ್ಗೆ ಪ್ರಿಯಾಂಕಾ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.