ಇಷ್ಟಪಟ್ಟ ಹುಡುಗನನ್ನು ಮದುವೆಯಾಗಲು ಬಿಡದ ಅಮ್ಮ: ಹೋರ್ಡಿಂಗ್ಸ್ ಮೇಲೆ ಕುಳಿತು ಬಾಲಕಿ ರಂಪಾಟ - ಇಂದೋರ್ನಲ್ಲಿ ಮದುವೆಯಾಗಲು ಒಪ್ಪದಕ್ಕೆ ಹೋರ್ಡಿಂಗ್ಸ್ ಹತ್ತಿ ಕುಳಿತ ಬಾಲಕಿ
ಇಂದೋರ್: ತಾನು ಇಷ್ಟಪಟ್ಟ ಹುಡುಗನೊಂದಿಗೆ ಮದುವೆ ಮಾಡಿಸಲು ಅಮ್ಮ ಒಪ್ಪದ್ದಕ್ಕೆ ಬಾಲಕಿವೋರ್ವಳು ರಸ್ತೆ ಮಧ್ಯದ ಹೋರ್ಡಿಂಗ್ಸ್ ಮೇಲೆ ಹತ್ತಿ ಕುಳಿತ ಘಟನೆ ಇಂದೋರ್ನ ಪರ್ದೇಸಿಪುರ ಭಂಡಾರಿ ಸೇತುವೆ ಬಳಿ ನಡೆದಿದೆ. ಕೆಳಗಿಳಿಯುವಂತೆ ಹೇಳಿದರೂ ಕೇಳದೆ ಹಠ ಹಿಡಿದು ಕೂತಿದ್ದ ಬಾಲಕಿಗೆ ಆಕೆ ಮದುವೆಯಾಗಬೇಕೆಂದು ಬಯಸಿದ ಹುಡುಗನ ಮೂಲಕ ಮನವೊಲಿಸಿ ಕೆಳಗಿಳಿಸಲಾಯಿತು ಎಂದು ಪರ್ದೇಸಿಪುರ ಠಾಣಾಧಿಕಾರಿ ಅಶೋಕ್ ಪಾಟಿದಾರ್ ತಿಳಿಸಿದ್ದಾರೆ.