ಕೊರೊನಾ ಗೆದ್ದುಬಂದ 100 ವರ್ಷದ ವೃದ್ಧೆ... ಚಪ್ಪಾಳೆ ಮೂಲಕ ಅಜ್ಜಿಗೆ ಸ್ವಾಗತ - 100 ವರ್ಷದ ವೃದ್ಧೆ ಗುಣಮುಖ
ಕೊರೊನಾ ಸೋಂಕಿನಿಂದ ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದು, ಬಲಿಯಾದವರಲ್ಲಿ ಹೆಚ್ಚು ಜನ ವೃದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಮಧ್ಯಪ್ರದೇಶದ ಇಂದೋರ್ನಲ್ಲಿ 100 ವರ್ಷದ ವೃದ್ಧೆ ಚಂದಾಬಾಯಿ ಗುಣಮುಖರಾಗಿದ್ದಾರೆ. ಸೋಂಕು ಗೆದ್ದ ನಂತರ ವೃದ್ಧೆ ತನ್ನ ಮನೆಗೆ ಮರಳಿದಾಗ ನೆರೆಹೊರೆಯವರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ನೂರು ವರ್ಷ ವಯಸ್ಸಾದರೂ ದೃಷ್ಟಿ ಸ್ಪಷ್ಟವಾಗಿದ್ದು, ಈಗಲೂ ದಿನಪತ್ರಿಕೆ ಓದುತ್ತಾರೆ.