ಆಸ್ಪತ್ರೆಗೆ ಹೋಗದೇ ಕೋವಿಡ್ ಗೆದ್ದ 92ರ ವೃದ್ಧ.. ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್! - ಆಸ್ಪತ್ರೆಗೆ ಹೋಗದೇ ಕೊರೊನಾ ಗೆದ್ದ 92ರ ವೃದ್ಧ
ಬಾಲಾಘಾಟ್(ಮಧ್ಯಪ್ರದೇಶ): ಕೊರೊನಾ ಪಾಸಿಟಿವ್ ಎಂಬ ಹೆಸರು ಕೇಳಿದ ತಕ್ಷಣವೇ ಅನೇಕರು ಭಯ ಭೀತರಾಗುತ್ತಾರೆ. ಆದರೆ ಇಲ್ಲೋರ್ವ 92ರ ವೃದ್ಧ ತುಳಸಿರಾಮ್ ಸೇಥಿಯಾ ಮನೆಯಲ್ಲಿದ್ದುಕೊಂಡೇ ಕೊರೊನಾ ಮಣಿಸಿದ್ದಾರೆ. ಇದೀಗ ಇವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಕೊರೊನಾ ಸೋಂಕು ದೃಢಗೊಳ್ಳುತ್ತಿದ್ದಂತೆ ಪ್ರತ್ಯೇಕವಾಗಿ ವಾಸಿಸಲು ಶುರು ಮಾಡಿದ್ದ ತುಳಸಿರಾಮ್, ನಿತ್ಯ ತಪ್ಪದೇ ವ್ಯಾಯಾಮ ಮಾಡುವ ಜೊತೆಗೆ ನಿಯಮಿತವಾಗಿ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಜತೆಗೆ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಕೋವಿಡ್ ಗೆದ್ದಿದ್ದಾರೆ. ಸಂಪೂರ್ಣವಾಗಿ ಆರೋಗ್ಯವಾಗುತ್ತಿದ್ದಂತೆ ತಮ್ಮ ಹಿರಿಯ ಮಗ, ಮೊಮ್ಮಗ ಹಾಗೂ ಮರಿ ಮೊಮ್ಮಗನೊಂದಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.