ಜಮೀನಿನಲ್ಲಿ ಪತ್ತೆಯಾದ 9 ಹೆಬ್ಬಾವಿನ ಮರಿಗಳನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು: ವಿಡಿಯೋ - ಗುಜರಾತ್
ಜಮೀನೊಂದರ ನೀರಿನ ಟ್ಯಾಂಕ್ ಬಳಿ ಇದ್ದ 9 ಹೆಬ್ಬಾವಿನ ಮರಿಗಳನ್ನು ಅರಣ್ಯಾಧಿಕಾರಿಗಳು ರಕ್ಷಿಸಿ ಕಾಡಿಗೆ ಬಿಟ್ಟಿರುವ ಘಟನೆ ಗುಜರಾತ್ನ ಭಾರುಚ್ ಜಿಲ್ಲೆಯ ಭಲೊಡ್ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರು ಹೆಬ್ಬಾವಿನ ಮರಿಗಳನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹೆಬ್ಬಾವಿನ ಮರಿಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.