ಲಡಾಖ್‌ನ 15,000 ಅಡಿ ಎತ್ತರದ ಕಣಿವೆಯಲ್ಲಿ ರಾರಾಜಿಸಿದ 76 ಅಡಿ ಎತ್ತರದ ರಾಷ್ಟ್ರಧ್ವಜ - ಫೈರ್ ಅಂಡ್ ಫ್ಯೂರಿ ಕಾರ್ಪ್ಸ್
15,000 ಅಡಿ ಎತ್ತರದಲ್ಲಿರುವ ಲಡಾಖ್‌ನ ಹಾನ್ಲೆ ಕಣಿವೆಯಲ್ಲಿ ಭಾರತೀಯ ಸೇನೆಯು ಭಾನುವಾರ 76 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಿದೆ. ಭಾರತೀಯ ಸೇನೆಯ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಧ್ವಜಾರೋಹಣ ನೆರವೇರಿಸಿ ಟ್ವಿಟರ್‌ನಲ್ಲಿ ಕಾರ್ಯಕ್ರಮದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಧ್ವಜವನ್ನು ಭಾರತೀಯ ಸೇನೆ ಮತ್ತು ಭಾರತದ ಧ್ವಜ ಫೌಂಡೇಶನ್ ನಿರ್ಮಿಸಿದೆ.