ಪೈಪ್ಲೈನ್ ಒಳಗೆ ಸೇರಿಕೊಂಡಿದ್ದ ಆರು ಬೃಹತ್ ಹೆಬ್ಬಾವುಗಳನ್ನು ರಕ್ಷಿಸಿದ ಅರಣ್ಯ ಇಲಾಖೆ - ಒಡಿಶಾ ಹೆಬ್ಬಾವು ರಕ್ಷಿಣೆ ನ್ಯೂಸ್
ಒಡಿಶಾ: ಪೈಪ್ಲೈನ್ನೊಳಗೆ ಸೇರಿಕೊಂಡಿದ್ದ ಆರು ಬೃಹತ್ ಹೆಬ್ಬಾವುಗಳನ್ನು ಅರಣ್ಯ ಇಲಾಖೆ ರಕ್ಷಿಸಿದೆ. ಧೆಂಕನಲ್ ಜಿಲ್ಲೆಯ ಸಪ್ತಸಜ್ಯ ಗ್ರಾಮದಲ್ಲಿ ಘಟನೆ ನಡೆದಿದೆ. ರಕ್ಷಿಸಲಾಗಿರುವ ಹಾವುಗಳ ಪೈಕಿ ಒಂದು ಹಾವು 18, ಮತ್ತೊಂದು 12 ಹಾಗೂ ಇನ್ನೊಂದು 8 ಅಡಿ ಉದ್ದವಿತ್ತು ಎಂದು ಮೂಲಗಳು ತಿಳಿಸಿವೆ. ಅರಣ್ಯ ಇಲಾಖೆ ಸಿಬ್ಬಂದಿ ಎಲ್ಲ ಹೆಬ್ಬಾವುಗಳನ್ನು ರಕ್ಷಿಸಿ ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಇನ್ನು ಹೆಬ್ಬಾವನ್ನು ನೋಡಲು ಜನ ಮುಗಿಬಿದ್ದಿದ್ದು, ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.