ಎಕ್ಸೆಲ್ ಕಟ್ ಆಗಿ ಕಾರ್ಗೆ ಗುದ್ದಿದ ಟ್ರಕ್... ಮನೆಗೆ ತೆರಳುತ್ತಿದ್ದ ಆರು ಜನ ಸೇರಿದ್ರು ಮಸಣ! - 6 killed in road accident,
ಎಕ್ಸೆಲ್ ಕಟ್ ಆಗಿ ಎದುರಿಗೆ ಬರುತ್ತಿದ್ದ ಕಾರ್ಗೆ ಟ್ರಕ್ ಗುದ್ದಿದ ಪರಿಣಾಮ ಸ್ಥಳದಲ್ಲೇ ಆರು ಜನ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಎರಂಡೋಲ್ ನಗರದ ಹೊರವಲಯದಲ್ಲಿ ನಡೆದಿದೆ. ಟ್ರಕ್ ಗುದ್ದಿದ ರಭಸಕ್ಕೆ ಪ್ರಯಾಣಿಕರ ದೇಹಗಳು ಕಾರಿನಿಂದ ಹಾರಿ ಬಿದ್ದಿದ್ದು, 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಧ್ಯಾಹ್ನ 3:30ಕ್ಕೆ ಟ್ರಕ್ ಧುಲೇಯಿಂದ ಜಲ್ಗಾಂವ್ ಕಡೆ ತೆರಳುತ್ತಿದ್ದ ವೇಳೆ ಎಕ್ಸೆಲ್ ಕಟ್ ಆಗಿದೆ. ಹೀಗಾಗಿ ಈ ಭೀಕರ ದುರಂತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Last Updated : Dec 23, 2019, 6:57 PM IST